Kishore Kumar Biography: Book review

ವಿಮರ್ಶೆ: ಗಾಯಕನ ಜೀವನ ಚಿತ್ರ: 
ಕಿಶೋರ್ ಕುಮಾರ್ : ಮೆಥಡ್ ಇನ್ ಮ್ಯಾಡ್ ನೆಸ್ಸ್
~~~~~~~~~~~~~~~~~~~~~~~~~~~~~~~

Kishore Kumar: Method in Madness by [Bose, Derek]

ಕಿಶೋರ್ ಕುಮಾರ್ ಎಂದರೆ ಹಿಂದಿ ಚಿತ್ರರಸಿಕರಲ್ಲಿ ಯಾರಿಗೆ ಗೊತ್ತಿಲ್ಲ?...
ಸುಮಾರು (1950-85) ನಾಲ್ಕೈದು ದಶಕಗಳ ಕಾಲ ಬಹು ಮುಖ ಪ್ರತಿಭೆಯಿಂದ ನಟಿಸಿ, ಹಾಡಿ, ಕುಣಿದು, ಚಿತ್ರಗಳನ್ನು ತಾನೇ ನಿರ್ಮಿಸಿ ಅಮರನಾದ ಮಹಾನ್ ಗಾಯಕ.
ಇವರ ಜೀವನ ಚರಿತ್ರೆಯ ಪುಸ್ತಕವನ್ನು ಡೆರೆಕ್ ಬೋಸ್ (2004) ಬರೆದಿದ್ದಾರೆ.
ಅಣ್ಣ ಅಶೋಕ್ ಕುಮಾರ್ (ದಾದಾ ಮೋನಿ) ಎಂಬ ಮಹಾನ್ ಜನಪ್ರಿಯ ನಟ, ತಮ್ಮನೂ ಅನೂಪ್ ಕುಮಾರ್ ಕಲಾವಿದ ಮಧ್ಯಪ್ರದೇಶದ ಖಾಂಡ್ವಾ ದಲ್ಲಿ ಬಂಗಾಳಿ ಕುಟುಂಬದಲ್ಲಿ ಹುಟ್ಟಿದ ಅಭಾಸ್ ಕುಮಾರ್ ಗಂಗೂಲಿ , ಚಿಕ್ಕ ವಯಸ್ಸಿನಲ್ಲೆ ಬಹಳ ತುಂಟ, ಬಾಲ್ಯ ಜೀವನವನ್ನು ತರಲೆಯೆಬ್ಬಿಸುತ್ತಾ, ಹಾಡಿ ಕುಣಿಯುವ ಶೈಲಿಯಲ್ಲಿ ಉಡಾಯಿಸಿದವನಂತೆ. ಅವನ ಹಾಡಿನ ಪ್ರತಿಭೆಯನ್ನು ಕಂಡು ಮೂಗಿನ ಮೇಲೆ ಬೆರಳಿಡದವರಿಲ್ಲ. 
ತನಗಾಗಿ ಶಾಸ್ತ್ರೀಯ ಸಂಗೀತ ಶಿಕ್ಷಣವನ್ನೇ ಪಡೆಯದ ಕಿಶೋರ್ ಒಬ್ಬ "ಹುಟ್ಟಾ" ಕಲಾವಿದ.. ಅಮೋಘವಾಗಿ ರಾಗ ತಾಳ ಹಿಡಿದು ಹಾಡಬಲ್ಲವನಂತೆ, ವಿರಾಮದಲ್ಲಿ ಗೆಳೆಯರ ಕಣ್ಮಣಿ.
ಮುಂಬೈಗೆ ಬಂದಮೇಲೂ ಯುವಕ ಸ್ವಾಭಿಮಾನಿ ಕಿಶೋರ್ ತಾನು ಹಾಡುಗಾರನಾಗಬೇಕೆಂದೇ ಹೊರಟವರಂತೆ..ಅಣ್ಣ ಅಶೋಕ್ ಮನೆಯಲ್ಲಿ ಗುಪ್ತವಾಗಿದ್ದು, ಯಾರಲ್ಲಿಯೂ ಇಂತ ಖ್ಯಾತ ನಟನ ತಮ್ಮ ಎಂದು ಹೇಳಿಕೊಳ್ಳದೇ ಅಜ್ಞಾತ ವ್ಯಕ್ತಿಯಂತೆ ಹಾಡಿನ ಕೆಲಸ ಹುಡುಕುತ್ತಿದ್ದರು. ಆಗೆಲ್ಲಾ ಸೈಗಾಲ್, ಪಂಕಜ್ ಮಲ್ಲಿಕ್ ರಂತವರು ( 50 ರ ದಶಕದಲ್ಲಿ) ಶಾಸ್ತ್ರೀಯವಾಗಿ ನಾಟಕೀಯವಾಗಿ ಹಾಡುತ್ತಿದ್ದ ಕಾಲ..ಸಹಜವಾಗಿಯೇ ಆಗ ಸಂಗೀತ ಕಲಿಯದವನೆಂಬ ಲೋಪದಿಂದ ಕಿಶೋರ್ ಬದುಕು ದುಸ್ತರವಾಯಿತು. ನಾಟಕ ಮೂಲಕ ಚಲಚಿತ್ರಗಳಲ್ಲಿ ಗಾಯಕನಾಗಿ ಪದಾರ್ಪಣೆ ಮಾಡುವ ಹುಚ್ಚಿನಿಂದ ಬಂದವರು ಒಲ್ಲದ ಮನಸ್ಸಿನಿಂದ ಅಭಿನಯಕ್ಕೆ ಇಳಿದ ಕಿಶೋರ್, ತನ್ನ ಕಾಮಿಕ್ ಪ್ರಜ್ಞೆ, ಸಹಜ ಹಾಸ್ಯ ಪ್ರವೃತ್ತಿಯಿಂದ ಒಂದೊಂದೇ ತನ್ನ ಬ್ರಾಂಡಿನ ಚಿತ್ರಗಳಲ್ಲಿ ಯಶಸ್ವಿಯಾಗುತ್ತಾ ಹೋದರಂತೆ..
ಆಗಿನ ಯಶಸ್ವಿ ತಾರೆಯರಾದ ವೈಜಯಂತಿಮಾಲಾ, ಸಾಧನಾ, ಕುಂಕುಂ, ನೂತನ್ ಹೀಗೆ ಎಲ್ಲರೊಂದಿಗೂ ತಮ್ಮ ಪ್ರತಿಭೆಯನ್ನು ಕಾಮೆಡಿ ನಾಯಕ ಪಾತ್ರಗಳಲ್ಲಿ ಮೆರೆಯುತ್ತ, ಆಯಾ ಚಿತ್ರಗಳ ಒಂದೊಂದೇ ಹಾಡುಗಳು ಹಿಟ್ ಆಗುತ್ತಾ ಹೋದವು. ತನಗೆ ಚಿತ್ರ ನಾಯಕನ ಪಾತ್ರ ಬೇಡ ಗಾಯಕ ಬೇಕು ಎಂದು ಹಠ ಹಿಡಿವ ಕಿಶೋರ್ ಗೆ ಆಗ ಯಶಸ್ಸು ಒಲಿದಿದ್ದು ಕಾಮೆಡಿ ನಾಯಕನಾಗಿಯೇ!
ಆಗಿನ ಖ್ಯಾತಿಗೆ ಕಾರಣ : ಮೇರೆ ಮೆಹೆಬೂಬ್ ಕಯಾಮತ್ ಹೋಗಿ, ಈನಾ ಮೀನಾ ದೀಕಾ, ಹಮ್ ತೋ ಮೊಹಬ್ಬತ್ ಕರೇಗಾ, ಏಕ್ ಲಡ್ಕಿ ಭೀಗಿ ಭಾಗೀಸಿ, ಮಾನಾ ಜನಾಬ್ ನೆ ಪುಕಾರಾ ನಹಿ, ಯೆ ರಾತೆ ಯೆ ಮೌಸಮ್ ಇಂತಾ ಹಾಡುಗಳು ಚಿತ್ರರಸಿಕರ ಬಾಯಲ್ಲೂ ಗುನುಗಲು ಆರಂಭಿಸಿದವು.
ಅವರಿಗೆ ಮೊದಲ ಹಿನೆಲೆ ಗಾಯಕ ಸಿಕ್ಕಿದ್ದೇ ಖ್ಯಾತ ನಟ ದೇವ್ ಆನಂದ್ ರವರ ನಟನೆಯ 1948 ರ ಜಿದ್ದಿಯಲ್ಲಿ. ಅವರಿಗೆ ವಿಶೇಷವಾಗಿ ದ್ವನಿ ಮಾಡ್ಯುಲೇಟ್ ಮಾಡಿ, ಯೊಡೆಲ್ಲಿಂಗ್ ಮಾದರಿ ಹಾಡಿದರಿಂದ ದೇವ್ ಗೆ ಸದಾ ಕಿಶೋರ್ ಹಾಡೇ ಬೇಕೆನ್ನಿಸತೊಡಗಿತ್ತು. ಇದು ದೇವ್ ಜತೆ ಜೀವನ ಪರ್ಯಂತದ ಸ್ನೇಹಕ್ಕೆ ಕಾರಣವಾಯಿತು, ನೂರಾರು ಹಾಡುಗಳನ್ನು ದೇವ್ ಗೆ ಮತ್ತು ತಮಗೆ ಮಾತ್ರ ಹಾಡುತ್ತಿದ್ದ ಕಿಶೋರ್ 65 ರಲ್ಲಿ ರಫಿ "ಮಧುರ ಗಾಯನದ" ಶೈಲಿಯ ಸಾಮ್ರಾಜ್ಯದಲ್ಲಿ, ನೇಪಥ್ಯಕ್ಕೆ ಸರಿದರೇನೋ ಎಂದಾಗ, 69ರ ಹೊಸ ನಟ ರಾಜೇಶ್ ಖನ್ನಾರ "ಆರಾಧನಾ" ಎಂಬ ಹಿಟ್ ಚಿತ್ರದ "ಮೇರೆ ಸಪನೋಂಕಿ, ರೂಪ್ ತೆರಾ ಮಸ್ತಾನಾ" ಮೂಲಕ ಮತ್ತೆ ಕಿಶೋರ್ ಹಾಡುಗಳು ಜನಜನಿತವಾಗಿ ಇದ್ದಕ್ಕಿದ್ದಂತೆ ಕಿಶೋರ್ ಒಮ್ಮೆಲೆ ನಂಬರ್ 1 ಗಾಯಕರಾಗಿ ಎರಡನೆ ದೊಡ್ಡ ಇನ್ನಿಂಗ್ಸ್ ಶುರು ಮಾಡಿಬಿಟ್ಟರು.
ಅದಕ್ಕೆ ಮೊದಲು ರಾಜೇಶ್ ಖನ್ನಾರನ್ನೇ ಮನೆಗೆ ಬರಮಾಡಿಕೊಂಡು ಅವರ ಇಂಟರ್ವ್ಯೂ ಮಾಡಿ " ತರಲೆ" ಬುದ್ದಿಯ ಕಿಶೋರ್ ಅವನ ಹಾವಭಾವ ಗಮನಿಸಿ ಅವನಿಗೆ ತಕ್ಕಂತೆ ಹಾಡತೊಡಗಿದರು..ಅವರಿಬ್ಬರ ಯಶಸ್ಸಿನ ಗಾಥೆ :-ಕಟಿ ಪತಂಗ್, ಸಚ್ಚಾ ಝೂಟಾ, ಅಮರ್ ಪ್ರೇಮ್, ಪ್ರೇಮ್ ನಗರ್, ಮೇರೆ ಜೀವನ್ ಸಾಥಿ ಇತ್ಯಾದಿ ಚಿತ್ರರಂಗೆದಲ್ಲೇ ಅದ್ವಿತೀಯ ಎನಿಸಿತು..ಎಲ್ಲರೂ ತಮ್ಮ ಚಿತ್ರ ನಾಯಕರ ಹಿನ್ನೆಲೆಗೆ ಕಿಶೋರ್ ಗೆ ಮುಗಿ ಬಿದ್ದರು. ನಿಧಾನವಾಗಿ ರಫಿ ಮತ್ತು ಮುಕೇಶ್ ನೇಪಥ್ಯಕ್ಕೆ ಸರಿದರು..ಮಧುರವಾದ, ಆದರೆ ಹೆಚ್ಚು ವ್ಯತ್ಯಾಸವೆ ಇಲ್ಲದ ( ಸ್ವಲ್ಪ ಹೆಣ್ಣಂಗಿ ಎನಿಸುವ) ಮಹಮದ್ ರಫಿ ದನಿಗಿಂತ ವೈವಿಧ್ಯಮಯ ಮ್ಯಾಚೋ, ಬೇಸ್ ವಾಯ್ಸ್ ಇದ್ದ ಗಾಯಕ ಕಿಶೋರ್ ಹಾಡುಗಳು ಚಿತ್ರದ ಯಶಸ್ಸಿಗೂ, ತನ್ನ ವೃತ್ತಿಯ ಯಶಸ್ಸಿಗೂ ಕಾರಣವಾಯಿತು..ಕಿಶೋರ್ ಗೆ ಅವರ ಅಭಿನಯ ಪ್ರತಿಭೆಯೇ ವರವಾಯ್ತು.
ಅಮಿತಾಭ್ ಬಚ್ಚನ್ ಗೆ ತಕ್ಕ ಡೀಪ್ ಬೇಸ್ ವಾಯ್ಸ್, ರಾಜೇಶ್ ಮತ್ತು ಧರ್ಮೆಂದ್ರರಿಗೆ ತಕ್ಕ ವಾಯ್ಸ್ ಮಾಡ್ಯುಲೆಶನ್, ಜಿತೇಂದ್ರ, ರಿಶಿ ಕಪೂರರ ರೊಮಾಂಟಿಕ್ ಪೀಳಿಗೆಗೆ ತಕ್ಕ "ಯುವ" ದನಿ ಒಂದು ಕಡೆಯಾದರೆ, ಸಫ಼ರ್ , ಕೋರಾ ಕಾಗಜ್, ಖುಶ್ಬೂ, ಪರಿಚಯ್ ಚಿತ್ರದ ಗಂಬೀರ/ ದುಃಖದ ಹಾಡುಗಳು ಅವರ ಬತ್ತಳಿಕೆ ಸೇರಿ ಎಲ್ಲರಿಗೂ ವಿಸ್ಮಯ ಮೂಡಿಸಿದವು... ಹೀಗೆ ಪ್ರತಿ ನಾಯಕನ, ಮತ್ತು ಚಿತ್ರಕತೆ ಸನ್ನಿವೇಶದ ಜಾಡು ಹಿಡಿದು ಹಾಡತೊಡಗಿದ ಕಿಶೋರ್ ಕುಮಾರ್ ನಿಜವಾದ "ಹಿನ್ನೆಲೆ" ಗಾಯಕ ಎಂದರೇನು ಎಂದು ಮೊದಲಬಾರಿಗೆ ತೋರಿಸಿಕೊಟ್ಟರು.
ಇಲ್ಲೇ ಅವರು ರಫಿ. ಮುಕೇಶ್ ರ ಏಕತಾನತೆಯ ದನಿಯಿಂದ ಹೊರತಾಗಿ ಕಾಣಿಸಿಕೊಂಡಿದ್ದು ..ರಫಿ, ಮುಕೇಶರನ್ನು ಪದವಿ ಪಂದ್ಯದಲ್ಲಿ ಮುಕ್ಕಾಲುವಾಸಿ ಹಿಮ್ಮೆಟ್ಟಿಸಿದ ಎಂಟು ಫ಼ಿಲಂ ಫ಼ೇರ್ ಗಾಯಕ ಅವಾರ್ಡ್ ತಮ್ಮದಾಗಿಸಿಕೊಂಡರು( ಗಾಯಕಗಾಗಿ ಇದೇ ಒಂದು ರೆಕಾರ್ಡ್!)..
ಅವರು ಕಂಡಿದ್ದ ಗಾಯಕನ ಯಶಸ್ಸಿನ ಬಾಲ್ಯದ ಕನಸು 40ರ ನಂತರದ ವಯಸ್ಸಿನಲ್ಲಿ ಅವರ ಪಾದಗಳನ್ನು ಚುಂಬಿಸಿತು. ಕಿಶೋರ್ ಹಾಡಲು ಬಂದನೆಂದರೆ ಅಲ್ಲಿ ಚಿತ್ರದ ಸೆಟ್ ರೆಕಾರ್ಡಿಂಗ್ ಸಮಯದಲ್ಲೆ ರೆಡಿ ಇರಬೇಕಿತ್ತಂತೆ...ಅಲ್ಲಿ ಅವರು ಯಾವ ನಾಯಕ ನಟನಿಗೆ ಹಾಡುತ್ತಿದ್ದೇನೆ, ಆತನ ದ್ವನಿ, ಶೈಲಿ, ಹಾವ ಭಾವ ಗಮನಿಸಿ , ತಾವೇ ಸೂಕ್ತ ಅಭಿನಯ ಮಾಡುತ್ತಾ ಹಾಡಿ ಎಲ್ಲರಿಗೂ ಅಚ್ಚರಿ ಮೂಡಿಸುತ್ತಿದ್ದರೆಂದು ಅಕ್ಕ ತಂಗಿ ಜೋಡಿ ಲತಾ ಮಂಗೇಶ್ಕರ್ ಮತ್ತು ಆಶಾ ಭೋಸ್ಲೆ ಹೇಳುತ್ತಾರೆ... ಇವರು ತಮ್ಮನ್ನು ಹೊಟ್ಟೆ ಹುಣ್ನಾಗಿಸುವಂತೆ ನಗಿಸುತ್ತಿದ್ದರೆ ಹಾಡು ಹೇಗೆ ರೆಕಾರ್ಡ್ ಮಾದಲು ಸಾಧುಅ ಎಂದು ಸಹ ಗಾಯಕೈಯರು ಲಘು ಹಾಸ್ಯದಿಂದ ನೆನಿಸಿಕೊಳ್ಳುತ್ತಾರೆ
ಒಮ್ಮೆಯಂತೂ ಸೈಕಲ್ ನಲ್ಲಿ ಹೋಗುವ ನಾಯಕನ ಹಾಡು- "ಡಾಕಿಯಾ ಡಾಕ್ ಲಾಯಾ" ಎಂಬ ಹಾಡಿಗೆ ಅಲ್ಲಿ ತಾವೇ ಸೈಕಲ್ ನೆಡೆಸಿ ಬೆಲ್ ಟ್ರಿನ್ ಟ್ರಿನ್ ಎನಿಸುತ್ತಾ ಹಾಡಿದರಂತೆ..ಅಷ್ಟು ನೈಜತೆಯನ್ನು ಅವರು ಪ್ರತಿ ಹಾಡಿಗೂ, ಸ್ಟುಡಿಯೋಗೆ ತರುತ್ತಿದ್ದರು. ಹಾಡಿಗೂ ಚಿತ್ರಕ್ಕೂ ಮೌಲ್ಯ-ವರ್ಧನೆ ಮಾಡಿ ಕೊಡುತ್ತಿದ್ದರು. 
ಕಿಶೋರ್ ಒಬ್ಬ ಲೈವ್ ವೈರ್ ( ವಿದ್ಯುತ್ ಹರಿವ ತಂತಿ) ತರಹ ಎನ್ನುತ್ತಿದ್ದರು ಆಗಿನ ನಾಯಕರು...ಅವರನ್ನು ಜೀನಿಯಸ್ ಸಿಂಗರ್ ಎಂದು ಹಿಂದಿ ಚಿತ್ರರಂಗವೇ ಒಪ್ಪುತ್ತಿತ್ತು.
ಆಗಿನ ಜನಪ್ರಿಯ ಸಂಗೀತ ನಿರ್ದೇಶಕರಾದ ಆರ್ ಡಿ ಬರ್ಮನ್, ಲಕ್ಷ್ಮೀ-ಪ್ಯಾರೆ, ಕಲ್ಯಾಣ್ ಜೀ ಆನಂದ್ ಜಿ ಮುಂತಾದವರು ಕಿಶೋರ್ ಇಲ್ಲದೇ ಚಿತ್ರದ ಹಾಡುಗಳನ್ನು ಆ ಎರಡು ಮೂರು ದಶಕಗಳಲ್ಲಿ ರೆಕಾರ್ಡ್ ಮಾಡಿದ್ದೇ ಇಲ್ಲವಂತೆ...ಅಷ್ಟೇ ಏಕೆ ರಾಜೇಶ್ ಖನ್ನಾ, ರಿಶಿ ಕಪೂರ್, ಜಿತೇಂದ್ರ ಇಂತಹಾ ನಟರು ಅವರ ಹಾಡಿನ ರೆಕಾರ್ಡಿಂಗ್ ಇದ್ದರೆ ಅಲ್ಲಿ ತಾವಿದ್ದು ಕಿಶೋರ್ ಅಭಿನಯವನ್ನು ಗಮನಿಸಿ ಕಲಿಯುತ್ತಿದ್ದರಂತೆ, ನಿರ್ದೇಶಕರೇ ನಾಯಕರನ್ನು ನೋಡಲು ರೆಕಾರ್ಡಿಂಗಿಗೆ ಕರೆಸಿದ್ದೂ ಇದೆಯಂತೆ.
ಅದಕ್ಕೇ ಆ ಕಾಲದ ಕಿಶೋರ್ ಹಾಡುಗಳನ್ನು ಕೇಳಿದಾಗ, ನೋಡಿದಾಗ ನಾಯಕನೇ ಖುದ್ದಾಗಿ ಹಾಡಿದಂತಿರುತಿತ್ತು. ಅವರ ಹಾಡುಗಳ ಚಿಕ್ಕ ಪಟ್ಟಿ ಇಲ್ಲಿದೆ:
https://en.wikipedia.org/…/List_of_songs_recorded_by_Kishor…
*80 ರ ದಶಕದವರೆಗೂ ಅನಭಿಶಿಕ್ತ ದೊರೆಯಂತೆ ಮೆರೆದ ಕಿಶೋರ್ ನಾಲ್ಕು ಬಾರಿ ಮದುವೆಯಾದರು. ಮೊದಲನೆಯವಳು ಬಂಗಾಳಿ ನಟಿ ರೊಮಾ, ಅಕಾಲ ಮೃತ್ಯುವಿಗೆ ತುತ್ತಾಗುವಳೆಂದು ತಿಳಿದೂ ಮದುವೆಯಾದ ವಿರಹದಲ್ಲಿದ ಅತಿ ಸುಂದರಿ ಮಧುಬಾಲಾ, ಜನಪ್ರಿಯ ನಟಿ ಯೋಗಿತಾ ಬಾಲಿ ಮತ್ತು ಮುದ್ದು ನಟಿ ಲೀಲಾ ಚಂದಾವರ್ಕರ್..ಒಬ್ಬರಿಗಿಂತಾ ಒಬ್ಬ ಸುಂದರಿಯರು ಪತ್ನಿಯರಾದರು ಈ ಪುಣ್ಯಾತ್ಮನಿಗೆ  !..ಇಬ್ಬರು ಗಂಡು ಮಕ್ಕಳು- ಅಮಿತ್ ಮತ್ತು ಸುಮಿತ್.
*ಆದರೂ ಸ್ವಲ್ಪ ತರಲೆ, ತಮಾಶೆಯವ, ಜಿಪುಣ ಎಂದೆಲ್ಲಾ ಇದ್ದರೂ ಎಲ್ಲರಿಗೂ ಹಾಡಿಗೆ ಮಾತ್ರ ಕಿಶೋರ್ ಬೇಕು! ಅಂತಾ ಅಜಾತಶತ್ರು ಈತ.
*ತಾವೇ ಚಲ್ತಿ ನಾ ನಾಮ್ ಗಾಡಿ, ದೂರ್ ಕಾ ರಾಹಿ, ದೂರ್ ಗಗನ್ ಕಿ ಚಾವ್ ಮೆ ಮುಂತಾದ ಚಿತ್ರಗಳ ಸಂಗೀತ ನಿಯೋಜನೆ ಮತ್ತು ನಿರ್ದೇಶನ - ನಿರ್ಮಾಣ ಕೂಡಾ ಮಾಡಿದರು, ಆದರೆ ಮೊದಲನೆಯದು ಬಿಟ್ಟು ಮಿಕ್ಕವು ಎಲ್ಲವೂ ಯಶಸ್ವಿಯಾಗಲಿಲ್ಲ.
*70ರ ಕಾಂಗ್ರೆಸ್ಸಿನ ಕಾರ್ಯಕ್ರಮದಲ್ಲಿ ಹಾಡುವ ಬೇಡಿಕೆಗೆ ಮಣಿಯದ ಕಿಶೋರ್ ಎಮೆರ್ಜೆನ್ಸಿ ಕಾಲದದಲ್ಲಿ ಆಕಾಶವಾಣಿ ಮತ್ತು ದೂರದರ್ಶನದ ತಮ್ಮ ಎಲ್ಲಾ ಹಾಡುಗಳ ಬಹಿಷ್ಕಾರವನ್ನೂ ಅನುಭವಿಸಿದರು! ( ಇಂದಿರಾ- ಸಂಜಯ್ ಕೃಪೆಯಿಂದ)
*ಖುದ್ದಾಗಿ ಅಮಿತಾಬ್ ತಮ್ಮ ಚಿತ್ರಕ್ಕೆ ನಟನೆಗೆ ಬರಲಿಲ್ಲವೆಂದು ಮುನಿಸಿಕೊಂಡು ಕೆಲ ಕಾಲ ಅವರಿಗೆ ಹಿನ್ನೆಲೆ ಹಾಡದೇ, ನಂತರ ಸಂಧಿ ಮಾಡಿಕೊಂಡಿದ್ದೂ ಇದೆ. (ಆದರೆ ಅವರು ಅಮಿತಾಭ್ ಗೆ ಹಾಡಿದ ಮುಕದ್ದರ್ ಕಾ ಸಿಕಂದರ್ ( ಓ ಸಾಥಿರೆ), ಅಭಿಮಾನ್, ಯಾರಾನಾ, ಶರಾಭಿ ಚಿತ್ರದ ಹಾಡುಗಳು ಸೂಪರ್ ಹಿಟ್ಸ್ ಆದವು)
*ಕನ್ನಡದಲ್ಲಿಯೂ ದ್ವಾರಕೀಶ್ ಗೆ ಹಿನ್ನೆಲೆಯಾಗಿ ಕುಳ್ಳ ಏಜೆಂಟ್ 000 ನಲ್ಲಿ ಆಡೂ, ಆಟ ಆಡೂ ಎಂಬ ಒಂದು ಹಾಡು ಹಾಡಿದ್ದಾರೆ. ಕೇಳಿ ನೋಡಿ.
*ಕಿಶೋರ್ ಒಬ್ಬ ವೆಜ್ಜೀ, ಸಿಗರೇಟ್ ಹೆಂಡ ಮುಟ್ಟುತ್ತಿರಲಿಲ್ಲವಂತೆ
*58ನೆ ವಯಸ್ಸಿಗೆ ಇದ್ದಕ್ಕಿದ್ದಂತೆ ಮೃತರಾದ ಕಿಶೋರ್ ಆ ಸ್ಥಾನಕ್ಕೆ ದೊಡ್ಡ ವ್ಯಾಕ್ಯೂಂ ಉಂಟು ಮಾಡಿದರು. ನಾಯಕರೆಲ್ಲಾ ನಾವಿಂದು ಮೂಕರಾದೆವು ಎಂದರಂತೆ,
ಇಂತಾ ಹಲವಾರು ರಸಮಯ ಘಟನೆಗಳ ದಾಖಲೆಯಿರುವ ಈ ಪುಸ್ತಕವನ್ನು ಚಿತ್ರ ರಸಿಕರು ಓದಬಹುದು:
ನನ್ನ ರೇಟಿಂಗ್: 4.5/5 ( ನಾನೊಬ್ಬ ಕಿಶೋರ್ ಫ್ಯಾನ್!)

http://amzn.to/2tU9g0B

Comments

Popular Posts