Khullam Khulla: Rishi Kapoor Book Review

ಚಿತ್ರ ನಟನ ಆತ್ಮ ಚರಿತ್ರೆ ವಿಮರ್ಶೆ:
ಖುಲ್ಲಮ್ ಖುಲ್ಲಾ: ರಿಷಿ ಕಪೂರ್- ಅನ್ ಸೆನ್ಸಾರ್ಡ್:
~~~~~~~~~~~~~~~~~~~~~~~~~~~~~



70-80 ರ ದಶಕಗಳ ಯುವ ನಟರಲ್ಲಿ ಖ್ಯಾತಿಯ ಶಿಖರವನ್ನೇರಿ ಮೆರೆದ ಚಾಕಲೇಟ್ ಹೀರೋ, ರಾಜ ಕಪೂರ್ ಪುತ್ರ ಬಾಲಿವುಡ್ ನಾಯಕ ರಿಷಿ
ಕಪೂರರ ಈ ಜೀವನ ಕತೆಯನ್ನು ಓದುವುದು ಒಂದು ರೋಚಕ ಅನುಭವ.
ಅವರೇ ಶೀರ್ಷಿಕೆಯಿಟ್ಟಂತೆ ಅನ್ ಸೆನ್ಸಾರ್ಡ್ ಅಂದರೆ ಬಂಧಮುಕ್ತ, ಸಂಕೋಚವಿಲ್ಲದ ಧೈರ್ಯವಾಗಿ ಬಾಲಿವುಡ್ಡಿನ ರಂಗೀನ್ ಜಗತ್ತಿನ ಮುಚ್ಚುಮರೆಯ
ಅನುಭವಗಳನ್ನು ಎಲ್ಲರ ಮುಂದೆ ಬಿಚ್ಚಿಟ್ಟಿದ್ದಾರೆ...
ತನ್ನನ್ನು ಬೆಳ್ಳಿ ಚಮಚ ಬಾಯಲಿಟ್ಟುಕೊಂಡು ಹುಟ್ಟಿದವ ಎಂದುಕೊಳ್ಳುವ ಈ ರಾಜ್ ಕಪೂರ್ ಪುತ್ರ ತಮ್ಮ ಬಾಲ್ಯದಲ್ಲಿ ಕಂಡ ತಂದೆಯ ಕಟ್ಟು ನಿಟ್ಟು
ನಿಯಮಾವಳಿ, ಪಾರ್ಟಿಯಲ್ಲಿ ಹರಿದ ಹೆಂಡದ ಹೊಳೆ, ತಂದೆಯ ಹಲವು ನಾಯಕ ನಟಿಯರ ಜತೆಗಿನ ಖಾಸಗಿ ಸಂಬಂಧಗಳು ಎಲ್ಲವನ್ನೂ ಖುಲ್ಲಮ್
ಖುಲ್ಲಾ ಆಗೇ ಬಯಲಿಗೆಳೆದಿದ್ದಾರೆ... ನರ್ಗೀಸ್, ವೈಜಯಂತಿಮಾಲ ಯಾರೂ ಇವರ ಹದ್ದಿನ ಕಣ್ಣಿನ ವಿಮರ್ಶೆಯಿಂದ ತಲೆಮರೆಸಿಕೊಳ್ಳುವಂತಿಲ್ಲ.
ತನ್ನ ಮತ್ತು ಡಿಂಪಲ್ ಕಪಾಡಿಯಾ ಪದಾರ್ಪಣ ಚಿತ್ರ - ಬಾಬ್ಬಿ ಬಗ್ಗೆ ಹೇಳುತ್ತಾ, ಆ ವರ್ಷದ ಪ್ರಶಸ್ತಿಗಳನ್ನು ಲಂಚ ಕೊಟ್ಟು ಆ ಚಿತ್ರಕ್ಕೆ ತಾವು ಕಬಳಿಸಿದ್ದನ್ನು ಹೇಳಿಕೊಳ್ಳುವ ಎದೆಗಾರಿಕೆ ಈತನದ್ದು. ಅದರ ನಾಯಕಿಯನ್ನು ಆಗಿನ ಸೂಪರ್ ಸ್ಟಾರ್ ರಾಜೇಶ್ ಖನ್ನಾ ಒಮ್ಮೆಲೇ ವಿವಾಹವಾಗಿದ್ದು , ಅದರಿಂದ
ಹಲಕಾಲ ’ಕಾಕಾ’ ರನ್ನು ಇವರು ಇಷ್ಟಪಡದೇ ದೂರವುಳಿದಿದ್ದು, ನಂತರ ಸತ್ಯಂ ಶಿವಂ ಸುಂದರಂ ಚಿತ್ರಕ್ಕೆ ಚಿಕ್ಕಪ್ಪ ಶಶಿ ಕಪೂರರನ್ನೆ ಖನ್ನಾ ಬದಲಿಗೆ
ತೆಗೆದುಕೊಳ್ಳಲು ಅಪ್ಪನಿಗೆ ಶಿಫಾರ್ಸ್ ಮಾಡಿದ್ದು , ನಂತರ ತಾವೆ ಆತನನ್ನು ತಮ್ಮ ಸ್ವಂತ ಚಿತ್ರಕ್ಕೆ ಆಹ್ವಾನಿಸಿದ್ದು...ಇವನ್ನೆಲ್ಲಾ ಸವಿವರವಾಗಿ
ದಾಖಲಿಸಿದ್ದಾರೆ. ತನ್ನ ಪತ್ನಿ ನೀತು ಸಿಂಗ್ ಜತೆ ಪ್ರೇಮ ಪ್ರಕರಣದ ನಂತರ ವಿವಾಹವಾದದ್ದು ಎಂದು ಹೇಳಿದವ, ತನ್ನನ್ನು ಮದುವೆಯಾಗಿ ಬದುಕು
ನಿಭಾಯಿಸುವುದರಲ್ಲಿ ಆಕೆ ಸಾಕಷ್ಟು ಹೆಣಗಿದ್ದಾಳೆ ಎಂದು ನಿಸ್ಸಂಕೋಚವಾಗಿ ಒಪ್ಪಿಕೊಳ್ಳುತ್ತಾರೆ...ಕೆಲವು ಕಡೆ ಪತ್ನಿ ನೀತು ಸಿಂಗ್ ಆಕ್ಷೇಪಕ್ಕೆ ಒಪ್ಪಿ
ಮಾತಿಗೆ ಕಡಿವಾಣ ಹಾಕಿದ್ದಾರಂತೆ.
ಒಟ್ಟಿನಲ್ಲಿ ಹಲವು ರಂಗು ರಂಗಿನ ಬದುಕಿನ ಸಹೋದ್ಯೋಗಿ ನಟ, ನಿರ್ಮಾಪಕ- ನಿರ್ದೇಶಕರ ಮಜಲುಗಳನ್ನು ಅನಾವರಣ ಮಾಡುವ ವೃತ್ತಾಂತ
ಹಿಂದಿ ಚಿತ್ರ ರಸಿಕ ಇಂಗ್ಲೀಶ್ ಓದುಗರಿಗೆ ಪ್ರಿಯವಾಗಬಹುದು...ಈ ಪುಸ್ತಕದಲ್ಲಿ ಬಂದ ಘಟನೆಗಳ ಬಗ್ಗೆ ಟ್ವಿಟ್ಟರ್ ನಲ್ಲಿ ಬಿಸಿ-ಬಿಸಿ ಚರ್ಚೆಯಾಗಿದೆ.
ಕಿಂಡಲ್ ಮತ್ತು ಪುಸ್ತಕ ಆವೃತ್ತಿ ಅಮೆಜ಼ಾನ್ ನಲ್ಲಿ ಲಭ್ಯವಿದೆ
ನನ್ನ ರೇಟೀಂಗ್: 3.5/5


http://amzn.to/2vkTkEE

Comments

Popular Posts