ಚೆನ್ನೆಗೆ ಬಂದ ಬಂಗಾರದ ಮನುಶ್ಯ!



ಇಂದು ಚೆನ್ನೈ ಕನ್ನಡಿಗರ ಪಾಲಿಗೆ ಬಹಳ ಸಂಭ್ರಮದ ಸುದಿನ..ಏಕೆಂದರೆ ಮೊದಲ ಬಾರಿಗೆ ಅಣ್ಣಾವರ ಮೇರು ಚಿತ್ರ "ಬಂಗಾರದ ಮನುಶ್ಯ" ಕನ್ನಡ ಚಲಚಿತ್ರವು ಇಲ್ಲಿ ಬೆಳಿಗ್ಗೆ ೧೧.೩೦ ಕ್ಕೆ ಪ್ರದರ್‍ಶಿತವಾಯಿತು..

ಎಲ್ಲ ಚೆನ್ನೈ ಕನ್ನಡಿಗರಂತೆ ನಾನೂ ಹೋಗಿದ್ದೆ.

೧೯೭೨ ರ ಅತ್ಯುನ್ನತ ಸುಪ್ರಸಿಧ್ಧ  ಡಾ.ರಾಜಕುಮಾರ್ - ಭಾರತಿ ಅಭಿನಯದ ಈ ಚಿತ್ರವನ್ನು ಇಲ್ಲಿ ನೆಡೆಯುತ್ತಿರುವ ಭಾರತೀಯ ಚಲನಚಿತ್ರದ ೧೦೦ ವರ್ಷದ ಶತಮಾನೋತ್ಸವದ ಅಂಗವಾಗಿ ಎಲ್ಲರಿಗೂ ಉಚಿತವಾಗಿ ಇಂದು ತೋರಿಸಲಾಯಿತು..

ಡಾ|| ರಾಜ್ ಮೊದಲ ಬಾರಿಗೆ ತೆರೆಯ ಮೇಲೆ ( ’ನಗು ನಗುತಾ ನಲಿ  ನಲಿ ’ ಹಾಡಿನಲ್ಲಿ) ಬಂದಾಗ ಎಲ್ಲರಂತೆ ಈ ನಿಮ್ಮ ಲೇಖಕನೂ ಸಿಳ್ಳೆ ಹೊಡೆದು ಚಪ್ಪಾಳೆ ತಟ್ಟಿದ್ದಾನೆ!!  ಚಿತ್ರಮಂದಿರ ಭರ್ತಿಯಾಗದಿದ್ದರೂ ಈ ಊರಿಗೆ ಶೇ ೬೦ ರಷ್ಟು ತುಂಬಿದ್ದೆ ಪುಣ್ಯ!

ಭಲೆ! ಭಲೆ! ಎಂತಾ ಚಿತ್ರ!!

  ಪತ್ನಿ ಸಮೇತ ಕನ್ನಡಿಗ ಮಿತ್ರರೊಂದಿಗೆ ಕುಳಿತು ಆನಂದವಾಗಿ ಈ ಚಿತ್ರವನ್ನು ನಾವು ತಮಿಳುನಾಡಿನ ರಾಜಧಾನಿಯಲ್ಲಿಂದು ನೋಡಿದ್ದು...ಹಾ, ಈ ಚಿತ್ರ ಮಾಡುವ ಹೊತ್ತಿನಲ್ಲಿ ರಾಜ್ ಹಲವು ದಶಕಗಳ ಕಾಲದಿಂದ ಈ ಚೆನ್ನೈ ( ಮದರಾಸ್) ನಗರದಲ್ಲೆ ಇದ್ದರೆಂದು ಮರೆಯುವಂತಿಲ್ಲಾ...



 As a part of 100 years of Indian cinema in Chennai, we ( self and wife) just went for Bangaradha manushya , 1973, a Rajkumar masterpiece (which ran for 2 years in States theater then) here in Chennai at Sathyam Cinema FREE, first come first served. 

We went with lot of expectations and we were very thrilled to meet so many cheerful kannadigas who took time off to see a classic together. 
All were asking me and wife to join a kannadigara sangha and participate in functions..Theater was 60% full which is great for chennai!

Wonderful film ..
Brought tears in my eyes..Superhit songs and performances..

Tomorrow we have got 2 passes to see the the main celebrations of kannada filmworld in a Stadium in Chennai..
More on it on my blog with pics, late tomorrow..



Comments

Popular Posts